Tuesday, 17 September 2013

ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು? ಓದಿ -

  • ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು? ಓದಿ -
    http://dharmagranth.blogspot.com/2012/12/blog-post_9788.html

    Take Mouse over on Dharma Granth and Click Like

    Like Page - www.fb.com/dharma.granth
    Join to group - http://tiny.cc/Dharma-Granth-Group

    .
     · 
  • 17.9.2013 - ಇಂದು ಪ್ರದೋಷ ವ್ರತ

    ಅ.ತಿಥಿ: ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ಮೊದಲಿನ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎನ್ನುತ್ತಾರೆ.

    ಆ.ವ್ರತವನ್ನು ಮಾಡುವ ಪದ್ಧತಿ: ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.

    ಇ.ನಿಷೇಧ: ಪ್ರದೋಷಕಾಲದಲ್ಲಿ ವೇದಾಧ್ಯಯನವನ್ನು ಮಾಡಬಾರದು ಎಂದು ಹೇಳಲಾಗಿದೆ; ಏಕೆಂದರೆ ಇದು ರಾತ್ರಿಯ ಸಮಯದಲ್ಲಿನ ವ್ರತವಾಗಿದೆ ಮತ್ತು ವೇದಾಧ್ಯಯನವನ್ನು ಸೂರ್ಯನಿರುವಾಗ ಮಾಡಬೇಕಾಗುತ್ತದೆ.

    ಈ. ವಿಧಗಳು : ಸೋಮವಾರ ಬರುವ ಪ್ರದೋಷಕ್ಕೆ ಸೋಮಪ್ರದೋಷವೆನ್ನುತ್ತಾರೆ, ಮಂಗಳವಾರ ಬರುವ ಪ್ರದೋಷಕ್ಕೆ ಭೌಮಪ್ರದೋಷವೆನ್ನುತ್ತಾರೆ ಮತ್ತು ಶನಿವಾರ ಬರುವ ಪ್ರದೋಷಕ್ಕೆ ಶನಿಪ್ರದೋಷವೆಂದು ಕರೆಯುತ್ತಾರೆ. ಕೃಷ್ಣ ಪಕ್ಷದಲ್ಲಿನ ಪ್ರದೋಷವು ಒಂದು ವೇಳೆ ಶನಿವಾರ ಬಂದರೆ ಅದನ್ನು ವಿಶೇಷ ಫಲದಾಯಕವೆಂದು ತಿಳಿದುಕೊಳ್ಳಲಾಗುತ್ತದೆ.

    ಈ ಸಲದ ಪ್ರದೋಷ ಪೂಜಾ ಸಮಯ - ಸಾಯಂ. 6:15 ರಿಂದ 8:39

    (ಆಧಾರ : ಸನಾತನ ಸಂಸ್ಥೆಯ ಗ್ರಂಥ "ಶಿವ")

    ಗ್ರಂಥ ಪರಿಚಯ - 'ಶಿವ' ಓದಿ - http://bit.ly/1b0DPSl

    Take Mouse over on Dharma Granth and Click Like

    Like Page - www.fb.com/dharma.granth
    Join to group - http://tiny.cc/Dharma-Granth-Group

    .


No comments:

Post a Comment