ಇಂದು ವಾಮನ ಜಯಂತಿ - ವಾಮನ ದ್ವಾದಶಿ
ಇಂದು ವಾಮನ ಜಯಂತಿ - ವಾಮನ ದ್ವಾದಶಿ
ಶ್ರಾವಣ ಬಹುಳ ದ್ವಾದಶಿಯಂದು ಅಭಿಜಿನ್ ಮುಹೂರ್ತದಲ್ಲಿ ಕಶ್ಯಪ-ಅದಿತಿಯರ ಪುತ್ರನಾಗಿ ವಾಮನದೇವನ ಜನನವಾಯಿತು. ವಾಮನ ಕೂಡ ಕೃಷ್ಣನ ಅವತಾರ. ಅಂತೆಯೇ ಈತನೂ ಹುಟ್ಟುವಾಗ ಚತುರ್ಬಾಹುಗಳನ್ನುಳ್ಳವನಾಗಿ, ಒಂದೊಂದು ಕೈಯಲ್ಲೂ ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದು, ಶ್ರೀವತ್ಸ ಲಾಂಛನ ಹೊಂದಿ, ಕೊರಳಲ್ಲಿ ಕೌಸ್ತುಭ ಹಾರ ಧರಿಸಿ, ಹಳದಿ ವಸ್ತ್ರ ತೊಟ್ಟು, ವಜ್ರ ವೈಢೂರ್‍ಯಗಳಿಂದ ಅಲಂಕೃತವಾಗಿದ್ದ ಕಿರೀಟಧಾರಿಯಾಗಿ, ನೀಳ ಕೇಶರಾಶಿಯನ್ನುಳ್ಳವನಾಗಿ, ಅಮೂಲ್ಯ ತೋಳಬಂದಿ, ಕಡಗ, ಕರ್ಣಕುಂಡಲಗಳೇ ಮೊದಲಾದ ಆಭರಣಗಳನ್ನು ಧರಿಸಿದ್ದ. ನಂತರ ಈತ ವಾಮನ ಅಥವಾ ಕುಬ್ಜನ ರೂಪ ತಳೆದ.
ತನ್ನ ಪರಮ ಭಕ್ತ ಬಲಿ ಚಕ್ರವರ್ತಿಯ ಉದ್ದಾರಕ್ಕಾಗಿಯೇ ವಾಮನ ಜನ್ಮ ತಳೆದ. ಬಲಿ ಚಕ್ರವರ್ತಿ ನರಸಿಂಹ ದೇವನ ಕೃಪೆಗೆ ಪಾತ್ರನಾಗಿದ್ದ ಭಕ್ತ ಪ್ರಹ್ಲಾದನ ಮೊಮ್ಮಗ.
ಮಹಾನ್ ಕೃಷ್ಣ ಭಕ್ತನಾದರೂ ಬಲಿ ಚಕ್ರವರ್ತಿಗೆ ತಾನು ಮೂರು ಲೋಕಗಳ ಅರಸನೆಂಬ ಅಹಂಕಾರ ಬೆಳೆದಿತ್ತು. ಈ ಸಂದರ್ಭದಲ್ಲಿ ಅವನ ಬಳಿ ಬಂದ ವಾಮನ ದೇವ ಮೂರು ಪಾದಗಳನ್ನು ಊರುವಷ್ಟು ಜಾಗ ನೀಡುವಂತೆ ಕೇಳಿದ. ಬಲಿ ಚಕ್ರವರ್ತಿ ಅದನ್ನು ನೀಡಲು ಒಪ್ಪಿದ. ಮೂರು ಲೋಕಗಳಿಗೂ ಒಂದೊಂದು ಹೆಜ್ಜೆಯನ್ನು ಇಟ್ಟ ವಾಮನ, ಮೂರೂ ಲೋಕಗಳನ್ನು ಬಲಿಯಿಂದ ಪಡೆದುಕೊಂಡು. ಆ ಮೂಲಕ ತ್ರಿವಿಕ್ರಮನೆಂಬ ಬಿರುದು ಧರಿಸಿದ. ಹೀಗೆ ತನ್ನದೆಲ್ಲವನ್ನೂ ಕಳೆದುಕೊಂಡ ಬಲಿ ಚಕ್ರವರ್ತಿಗೆ ಕೃಷ್ಣನ ಪಾದ ಆಶ್ರಯಿಸದೇ ಈಗ ಬೇರೆ ದಾರಿಯೇ ಉಳಿಯಲಿಲ್ಲ. ಕೊನೆಗೆ ಆತ ತನ್ನ ಶಿರವನ್ನೇ ವಾಮನನಿಗೆ ಅರ್ಪಿಸಿದ. ಇಲ್ಲಿ ವಾಮನ ದೇವ ಬಲಿಯಿಂದ ಎಲ್ಲವನ್ನೂ ಕಿತ್ತುಕೊಂಡು ಆತನನ್ನು ತನ್ನ ಬಳಿಗೆ ಕರೆಸಿಕೊಳ್ಳುವ ಮೂಲಕ ಆತನ ಮೇಲೆ ಕೃಪೆ ತೋರಿದ್ದು ಒಂದು ವಿಶೇಷವಾದರೆ, ಕೃಷ್ಣನ ಪರಮ ಭಕ್ತನಾದ ಬಲಿ ತನ್ನದೆಲ್ಲವನ್ನೂ ಕಳೆದುಕೊಂಡು ಕೊನೆಗೆ ತನ್ನ ಶಿರವನ್ನೇ ಆತನಿಗೆ ಅರ್ಪಿಸುವ ಮೂಲಕ ತನ್ನ ಅನನ್ಯ ಭಕ್ತಿಯನ್ನು ಪ್ರದರ್ಶಿಸಿದ್ದು ಇನ್ನೊಂದು ವಿಶೇಷ.
ವಾಮನ ಜಯಂತಿಯ ಹಿಂದಿನ ದಿನ ಪಾರ್ಶ್ವ ಏಕಾದಶಿಯಂದು ಮಧ್ಯಾಹ್ನದವರೆಗೂ ಉಪವಾಸ ಕೈಗೊಳ್ಳುತ್ತಾರೆ. ವಾಮನ ದ್ವಾದಶಿಯಂದು ಕೃಷ್ಣನಿಗೆ ವಾಮನ ಅಲಂಕಾರ ಮಾಡಲಾಗುತ್ತದೆ. ಅಂದು ಕೇಸರಿ ದೋತಿ ಧರಿಸಿ, ಒಂದು ಕೈಯಲ್ಲಿ ಬಿದಿರಿನ ಛತ್ರಿ ಮತ್ತೊಂದು ಕೈಯಲ್ಲಿ ಮಡಕೆ ಹಿಡಿದುಕೊಂಡು ಕೃಷ್ಣ ವಾಮನನಾಗಿ ಕಂಗೊಳಿಸುತ್ತಾನೆ.
ವಾಮನ ವಟುವಾಗಿರುವುದರಿಂದ ಅಂದು ಕೃಷ್ಣನಿಗೆ ಯಾವುದೇ ಆಭರಣ ತೊಡಿಸುವುದಿಲ್ಲ. ಭಕ್ತರು ವಾಮನ ಮತ್ತು ಬಲಿಚಕ್ರವರ್ತಿಯನ್ನು ಸ್ತುತಿಸುತ್ತಾರೆ. ವಿವಿಧ ಆರತಿ, ಅಭಿಷೇಕಗಳು ನಡೆಯುತ್ತವೆ. ಅಂದು ಶಯನಾರತಿ ಸಂದರ್ಭದಲ್ಲಿ ಜಯದೇವ ಗೋಸ್ವಾಮಿ ರಚಿಸಿರುವ, ‘ಚಲಾಯಸಿ ವಿಕ್ರಮನೇ ಅದ್ಭುತ ವಾಮನ ಪಾದ...’ ಗೀತೆಯನ್ನು ಭಕ್ತರು ಸುಶ್ರಾವ್ಯವಾಗಿ ಹಾಡುತ್ತಾರೆ. - ಇಸ್ಕಾನ್
Take Mouse over on Dharma Granth and Click Like
Like Page - www.fb.com/dharma.granth
visit - http://dharmagranth.blogspot.com/
Join to group - http://tiny.cc/Dharma-Granth-Group
.
No comments:
Post a Comment