ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು? ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನುವುದರಿಂದ ಉತ್ಪನ್ನವಾಗುವ ನಾದಶಕ್ತಿಯಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕಾರ್ಯನಿರತವಾಗುತ್ತವೆ, ಹಾಗೆಯೇ ಸೀನುವುದರಿಂದ ಪ್ರಕ್ಷೇಪಿತವಾಗುವ ವಾಯುತತ್ತ್ವದ ಲಹರಿಗಳಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕೆಳಗಿನ ದಿಕ್ಕಿನಲ್ಲಿ (ಭೂಮಿಯ ಕಡೆಗೆ) ಪ್ರಕ್ಷೇಪಿತವಾಗದೆ ಮೇಲಿನ ದಿಕ್ಕಿನಲ್ಲಿ (ಆಕಾಶದೆಡೆಗೆ) ಪ್ರಕ್ಷೇಪಿತವಾಗುತ್ತವೆ. ಇದರಿಂದ ವಾಸ್ತುವಿನಲ್ಲಿ ತೊಂದರೆದಾಯಕ ಲಹರಿಗಳ ಸಂಚಾರವು ಹೆಚ್ಚಾಗುತ್ತದೆ; ಆದುದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಬಾರದು. ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಹೊಸ್ತಿಲಿನ ಮೇಲೆ ನೀರನ್ನು ಹಾಕಬೇಕೆಂದು ಹೇಳುತ್ತಾರೆ, ಇದರ ಕಾರಣವೇನು? ಹೊಸ್ತಿಲಿನ ಮೇಲೆ ನೀರನ್ನು ಹಾಕುವುದೆಂದರೆ ಒಂದು ರೀತಿಯಲ್ಲಿ ಮೇಲಿನ ದಿಕ್ಕಿನಲ್ಲಿ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳನ್ನು ಶಾಂತ ಮಾಡುವುದಾಗಿದೆ. ನೀರಿನಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳ ಲಹರಿಗಳಿಂದ, ವಾಯುತತ್ತ್ವದ ಆಧಾರದಿಂದ ಮೇಲಿನ ದಿಕ್ಕಿನಲ್ಲಿ ಚಲಿಸುತ್ತಿರುವ ಲಹರಿಗಳಿಗೆ ಜಡತ್ವವು ಪ್ರಾಪ್ತವಾಗುತ್ತದೆ. ಇದರಿಂದ ಆ ಲಹರಿಗಳು ಮತ್ತೆ ಭೂಮಿಯ ಕಡೆಗೆ ಚಲಿಸತೊಡಗುತ್ತವೆ. ಆದುದರಿಂದ ಒಂದು ವೇಳೆ ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನಿದರೆ ಕೂಡಲೇ ಅದರ ಮೇಲೆ ನೀರು ಹಾಕಿ ರಜ-ತಮಾತ್ಮಕ ಲಹರಿಗಳ ಶಮನ ಮಾಡಬೇಕು. ಸಂಬಂಧಿತ ಲೇಖನಗಳು ವಾಸ್ತು ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಕೂದಲನ್ನು ಏಕೆ ತೊಳೆಯಬಾರದು? ಕೂದಲನ್ನು ಬಿಸಿಲಿನಲ್ಲಿ ಒಣಗಿಸುವುದರಿಂದಾಗುವ ಲಾಭ ಮತ್ತು ಯಂತ್ರದಿಂದ ಒಣಗಿಸುವುದರಿಂದಾಗುವ ಹಾನಿ ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ? ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು? ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು? ಬಾಳೆಯ ಎಲೆಯನ್ನು ಇಡುವ ಪದ್ಧತಿ ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು! ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು? ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ? ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು? ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
Original Post from: http://dharmagranth.blogspot.in/2012/10/blog-post_2291.html
© Sanatan Sanstha - All Rights Reserved
Original Post from: http://dharmagranth.blogspot.in/2012/10/blog-post_2291.html
© Sanatan Sanstha - All Rights Reserved