Thursday, 19 December 2013

Dharma Granth

ನಮ್ಮೊಳಗಿರುವ ಆ ಘನತತ್ತ್ವವೆಂಬ ಭಗವಂತನನ್ನು ನಾವು ಕಾಣಬೇಕೆಂದರೆ ಆ ತತ್ತ್ವಕ್ಕೆ ನಮ್ಮನ್ನು ನಾವೇ ಒಪ್ಪಿಸಿಕೊಂಡು, ಎಲ್ಲದರಲ್ಲೂ, ಎಲ್ಲೆಲ್ಲೂ, ಯಾವಾಗಲೂ ಅದನ್ನೇ ಕಾಣುವ ಅಭ್ಯಾಸ ನಮಗೆ ಉಸಿರಾಡುವಷ್ಟು ಸಹಜವಾಗಬೇಕು. ಇದು ಅಷ್ಟು ಸುಲಭವಲ್ಲ, ದೀರ್ಘಕಾಲ ನಾವು ನಮ್ಮ ಅಂತರಂಗವನ್ನು ಕಠಿಣವಾಗಿ ಶಿಸ್ತುಗೊಳಿಸುವುದರಿಂದ ಮಾತ್ರ ಸಾಧ್ಯವಾಗುವುದು. ಇದು ಯಾರ ಪ್ರೇರಣೆಯಿಂದಲಾಗಲೀ, ಬಲವಂತದಿಂದಾಗಲೀ ಸಾಧ್ಯವಾಗುವಂತಹುದಲ್ಲ. ಇದು ನಮ್ಮೊಳಗಿರುವ ನಮ್ಮ ಆತ್ಮಕ್ಕೆ ಅತ್ಯಂತ ಆಪ್ತವಾಗಿ ಬೇಕಾಗಿರಬೇಕು. ಸಾಧಿಸುವ ಹಾದಿ ಕಠಿಣವಾದರೂ, ಅದರಲ್ಲೇ ನಡೆಯುವ ಹುಮ್ಮಸ್ಸು, ಹತೋಟಿ ಇರಬೇಕು. ಹೀಗಾಗಲು ನಮಗೆ ನಮ್ಮ ಮನಸ್ಸೇ ಅತ್ಯಂತ ಪ್ರಧಾನ ಕಾರ್ಯ ನಿರ್ವಹಿಸಬೇಕು. ಎಲ್ಲಕ್ಕೂ ಮೊದಲು ಇಂದ್ರಿಯಗಳ ಮೇಲೆ ನಿಯಂತ್ರಣ ಸಿಕ್ಕಬೇಕು. ಒಳಗೆ ಏನೇ ಕಠಿಣ ತಾಲೀಮು ನಡೆಯುತ್ತಿದ್ದರೂ ಹೊರ ಪ್ರಪಂಚಕ್ಕೆ ತೋರಗೊಡದೆ ಮನಸ್ಸು ನಿಗ್ರಹಿಸಬೇಕು. ಹೀಗೆ ನಮ್ಮನ್ನೇ ನಾವು ಸಂಪೂರ್ಣವಾಗಿ ಒಪ್ಪಿಸಿಕೊಂಡಾಗ ತನ್ನನ್ನೇ ಕೊಟ್ಟು ಬಿಡುವಂತಹ ಸರಳ, ಸುಲಭನೋ ನಮ್ಮ ಹರಿ.

source - harikathaamruthasara.blogspot.in

Like - www.fb.com/dharma.granth
Visit - http://dharmagranth.blogspot.in/
Subscribe Email - http://tiny.cc/Dharma-Granth-Group

.

No comments:

Post a Comment