Tuesday, 24 September 2013

ನಾನು ದತ್ತನಲ್ಲವೇ?

  • ನಾನು ದತ್ತನಲ್ಲವೇ?

    ಒ೦ದು ದಿನ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮೀಗಳು ಶೀಗೆಹಳ್ಳಿಯ ಶ್ರೀ ಶಿವಾನ೦ದರ ಮಠದಲ್ಲಿದ್ದಾಗ ಓಣಿಕೈ ತಿಮ್ಮಣ್ಣ ದೀಕ್ಷಿತರು ಬ೦ದಿದ್ದರು. ಇವರು ಸ್ವಲ್ಪ ಚಿಕಿತ್ಸಕ ಸ್ವಭಾವದವಾಗಿದ್ದರು. ಶ್ರೀ ಶಿವಾನ೦ದ ಗುರುಗಳು ಇರುವಾಗಿನ ಕಾಲದಿ೦ದಲೂ ಇವರಿಗೆ ಶ್ರೀ ಶ್ರೀಧರರ ಪರಿಚಯ ಇತ್ತು. ಆ ದಿನ ಸಹಜವಾಗಿ ಮಾತನಾಡುತ್ತಾ "ಗಾಣಗಾಪುರ ಕ್ಷೇತ್ರಕ್ಕೆ ಬರಲು ಶ್ರೀ ದತ್ತನ ಅಪ್ಪಣೆಯಾಗಿದೆ" ಎ೦ದು ದೀಕ್ಷಿತರು ಹೇಳೀದರು. ದೀಕ್ಷಿತರು ಅಗ್ನಿ ಉಪಾಸಕ ಅಗ್ನಿ ಹೋತ್ರಿಗಳಾಗಿದ್ದರು. ದತ್ತನ ಅಪ್ಪಣೆಯ ಮೇರೆಗೆ ಅಗ್ನಿಯನ್ನು ಜೊತೆಗೆ ತೆಗೆದುಕೊ೦ಡು ಗಾಣಗಾಪುರಕ್ಕೆ ಹೋಗುವ ತಯಾರಿಯಲ್ಲಿದ್ದರು ಈ ವಿಷಯವನ್ನು ಶ್ರೀ ಶ್ರೀಧರರಿಗೆ ತಿಳಿಸಲು ಬ೦ದಿದ್ದರು. ದತ್ತನ ಅಪ್ಪಣೆಯನ್ನು ತಿಳಿಸಿದ ಕೂಡಲೇ ಶ್ರೀ ಶ್ರೀಧರರು "ಈವಾಗ ನೀವು ಹೋಗುವುದು ಬೇಡ. ದೇಹದಲ್ಲಿ ಅಶಕ್ತತೆಯಾಗಿದೆ" ಎ೦ದು ಹೇಳಿದರು. ಅದನ್ನು ಕೇಳಿ ದೀಕ್ಷಿತರು "ದತ್ತನ ಅಪ್ಪಣೆಯಾಗಿರುವುದಲ್ಲ!" ಎ೦ದರು.

    ಅದಕ್ಕೆ ಶ್ರೀಧರರು "ದತ್ತನು ಎಲ್ಲಾ ಕಡೆಗೆ ವ್ಯಾಪಿಸಿಕೊ೦ಡಿದ್ದಾನೆ. ನಾನು ಹೇಳುವುದು ದತ್ತನೆ ಹೇಳಿದ೦ತೆ. ಆಗ ನಿಮ್ಮ ಆರೋಗ್ಯ ಚನ್ನಾಗಿರುವಾಗ ಹಾಗೆ ಹೇಳಿದನು. ಈಗ ಆರೊಗ್ಯ ಕೆಟ್ಟಾಗ ದತ್ತನೇ ಹೀಗೆ ಹೇಳುತ್ತಿರುವನು" ಎ೦ದು ಶ್ರೀ ಶ್ರೀಧರರು ನುಡಿದರು. 'ಇಷ್ಟು ಗಟ್ಟಿಯಾಗಿ ನಾನೇ ದತ್ತನೆ೦ದು ಹೇಗೆ ಹೇಳುವರು' ಎ೦ದು ಆಲೋಚಿಸುತ್ತಾ ಮನೆಗೆ ಹೋಗಿ ನ೦ತರ ಕೆರೆಯಲ್ಲಿ ದೀಕ್ಷಿತರು ಸ್ನಾನಕ್ಕೆ ಇಳಿದಾಗ ಆಕಾಶದಲ್ಲಿ ಶ್ರೀ ಶ್ರೀಧರರ ರೂಪವೇ ಕಾಣಿಸಿತು ನ೦ತರ ಆ ರೂಪವೆ ದತ್ತನ ಆಕಾರವಾಗಿ ದರ್ಶನ ಕೊಟ್ಟ೦ತೆ ಆಯಿತು. ಒಮ್ಮೆ ದತ್ತನ ರೂಪದಲ್ಲಿ ಕಾಣಿಸಿಕೊ೦ಡರೆ ಮರುಕ್ಷಣದಲ್ಲಿ ಅದೇ ಶ್ರೀ ಶ್ರೀಧರರ ರೂಪವಾಗಿಯೂ ಹೀಗೆ ಎರಡು ಮೂರು ಸಲ ಕಾಣಿಸಿಕೊ೦ಡು ಅದೃಶ್ಯವಾಯಿತು. ಇದನ್ನು ಕ೦ಡು ದೀಕ್ಷಿತರು ಚಿಕಿತರಾಗಿ ಸ್ತಬ್ಧರಾಗಿಬಿಟ್ಟರು. ಅದರೂ ಇದರ ಯಥಾರ್ಥತೆಯನ್ನು ತಿಳಿಯದೆ ಮೋದಲೆ ನಿರ್ಧರಿಸಿದ೦ತೆ ಸಹ ಕುಟು೦ಬರಾಗಿ ಗಾಣಗಾಪುರಕ್ಕೆ ತೆರಳಿದರು. ಅಲ್ಲಿ ಇವರಿಗೆ ದೇಹಾರೋಗ್ಯವು ಬಹಳ ಕೆಟ್ಟು ಅಲ್ಲಿ ಉಳಿಯಲಾಗಲಿಲ್ಲ. ಆವಾಗ ಶ್ರೀ ಶ್ರೀಧರರು ಹೇಳಿದ ಮಾತು ಮತ್ತು ಆದ ದೃಷ್ಟಾ೦ತವು ಕಣ್ಣೆದುರಿಗೆ ಬ೦ದು ನಿ೦ತು 'ಶ್ರೀ ಶ್ರೀಧರರು ಪ್ರತ್ಯಕ್ಷ ದತ್ತನೆ ಆಗಿದ್ದು ಅವರ ಅಜ್ಞೆಯನ್ನು ಅಲ್ಲಗಳೆದು ನಾನು ಗಾಣಗಾಪುರಕ್ಕೆ ಬ೦ದುದೇ ತಪ್ಪಾಯಿತೆ೦ದು' ತಿಳಿದು ಕೆಲವು ದಿವಸಗಳಲ್ಲಿಯೇ ಪುನಃ ಶ್ರೀ ಶ್ರೀಧರರ ಬಳಿ ಬ೦ದು ನಡೆದ ಸ೦ಗತಿಯನ್ನು ತಿಳಿಸಿ ಗುರುಗಳಲ್ಲಿ ಕ್ಷಮೆ ಬೇಡಿದರು.

    ಕೃಪೆ - Bhagavan Sadguru Sri Sridhara Swamy

    Take Mouse over on Dharma Granth and Click Like

    Like Page - www.fb.com/dharma.granth
    visit - http://dharmagranth.blogspot.com/
    Join to group - http://tiny.cc/Dharma-Granth-Group

    .
    Unlike ·  ·  · 17 hours ago · 
  • ತನಗೆ ಶರಣಾದ ಕಲಿಗೆ ರಾಜ ಪರೀಕ್ಷಿತ ನಾಲ್ಕು ಸ್ಥಾನಗಳನ್ನು ಕೊಟ್ಟು ಅಲ್ಲಿ ವಾಸ ಮಾಡುವಂತೆ ಅಪ್ಪಣೆ ನೀಡುತ್ತಾನೆ..
    ಅವುಗಳೆಂದರೆ: ದ್ಯೂತ, ಪಾನ, ಸ್ತ್ರೀ ಮತ್ತು ಸೂನಾ (ಹಿಂಸೆ).

    ಮೇಲ್ನೋಟಕ್ಕೆ ಈ ನಾಲ್ಕು ಸ್ಥಾನಗಳನ್ನು ನೋಡಿದರೆ ನಮಗೆ ಗೊಂದಲವಾಗುತ್ತದೆ. ದ್ಯೂತವನ್ನು ಕ್ಷತ್ರಿಯರು ಆಗಾಗ ಆಡುತ್ತಿದ್ದರು, ಮದ್ಯಪಾನ ಕ್ಷತ್ರಿಯರಿಗೆ ನಿಷಿದ್ಧವಲ್ಲ, ಎಲ್ಲಾ ಸ್ತ್ರೀಯರಲ್ಲಿ ಕಲಿ ವಾಸವಾಗಿರಲು ಸಾಧ್ಯವಿಲ್ಲ, ಪ್ರಾಣಿ ಬಲಿಯನ್ನು ಕ್ಷತ್ರಿಯರು ಯಜ್ಞದಲ್ಲೂ ನೀಡುತ್ತಿದ್ದರು. ಹೀಗಾಗಿ ಇಲ್ಲಿ ಹೇಳಿದ ಈ ನಾಲ್ಕು ಕಲಿ ಸ್ಥಾನವನ್ನು ಎಚ್ಚರಿಕೆಯಿಂದ ಅರ್ಥ ಮಾಡಿಕೊಳ್ಳಬೇಕು.. ಇದನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವರ್ಣಿಸುತ್ತಾ ಹೇಳುತ್ತಾರೆ: “ವಿಹಿತಾತಿರೇಕೇಣ ನ ಸೇವೇತೇತಿ” ಎಂದು. ಅಂದರೆ ಶಾಸ್ತ್ರ ವಿಹಿತವಾದುದನ್ನು ಹೊರತುಪಡಿಸಿ, ಈ ಮೇಲಿನ ನಾಲ್ಕು ಸ್ಥಾನಗಳಲ್ಲಿ ಕಲಿ ವಾಸಿಸುತ್ತಾನೆ ಎಂದರ್ಥ. ದ್ಯೂತದ ಚಟ, ಕುಡಿತದ ಚಟ, ಅತಿಕಾಮ/ಪರಸ್ತ್ರೀ ಸಂಗ, ಅತಿಮಾಂಸ ತಿನ್ನುವ ಚಟ ಇವು ಕಲಿಯ ವಾಸಸ್ಥಾನ. ಯಾವುದು ನಮಗೆ ವ್ಯಸನ(Addiction)ವಾಗಿ ಕಾಡುತ್ತದೋ ಅದು ಕಲಿಯ ತಾಣವಾಗಿರುತ್ತದೆ. ಅದರ ಹಿಂದೆ ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷಗಳು ಮನೆ ಮಾಡಿರುತ್ತವೆ...

    ನಾಲ್ಕು ಸ್ಥಾನಗಳನ್ನು ಪಡೆದ ಕಲಿ ಹೇಳುತ್ತಾನೆ: “ತತೋSನೃತಂ ಮದಃ ಕಾಮೋ ರಜೋ ವೈರಂ ಚ ಪಂಚಮಮ್”ಎಂದು. “ಸುಳ್ಳು, ಅಹಂಕಾರ, ಅತಿಕಾಮುಕತೆ, ರಾಗ-ದ್ವೇಷ ಎನ್ನುವ ಐದು ಪರಿವಾರ ನನ್ನದು. ಈ ಐದು ಪರಿವಾರದೊಂದಿಗೆ ವಾಸ ಮಾಡಲು ನನಗೆ ಕನಿಷ್ಠ ಐದು ಸ್ಥಾನಗಳನ್ನು ಕರುಣಿಸು” ಎಂದು ಕೇಳುತ್ತಾನೆ ಕಲಿ. ಕಲಿಯ ಪ್ರಾರ್ಥನೆಯನ್ನು ಮನ್ನಿಸಿದ ಪರೀಕ್ಷಿತ ಆತನಿಗೆ ಐದನೇ ಸ್ಥಾನವಾಗಿ “ಚಿನ್ನ”ದಲ್ಲಿರಲು ಸೂಚಿಸುತ್ತಾನೆ .. ಹೀಗಾಗಿ ಚಿನ್ನದ ಅಥವಾ ಸಂಪತ್ತಿನ ಅತಿಮೋಹ ಕಲಿಯ ವಾಸಸ್ಥಾನವಾಗುತ್ತದೆ...

    ಕೃಪೆ - Bhagavad Gita Kannada

    Take Mouse over on Dharma Granth and Click Like

    Like Page - www.fb.com/dharma.granth
    visit - http://dharmagranth.blogspot.com/
    Join to group - http://tiny.cc/Dharma-Granth-Group

    .
    Like ·  ·  · 15 hours ago · 
  • Hari Devote shared Follow My ( God ) Words & Move on's photo.
    plz like our blog as well .... .

No comments:

Post a Comment