ಶಾಂತ ನಿದ್ರೆಗಾಗಿ ಏನು ಮಾಡಬೇಕು? ಇತ್ತೀಚೆಗೆ ಬಹಳಷ್ಟು ಜನರಿಗೆ ನಿದ್ರೆ ಮಾಡಿದಾಗ ಭಯಂಕರ ಕನಸುಗಳು ಬೀಳುವುದು, ನಿದ್ರೆಯಲ್ಲಿ ಕಿರುಚಾಡುವುದು, ನಿದ್ರೆ ಮಾಡಿದಾಗ ಸುತ್ತಮುತ್ತಲೂ ಯಾರದ್ದಾದರೂ ಸಂಚಾರವಿದೆ ಎಂದು ಅನಿಸುವುದು, ನೆರಳು ಕಾಣಿಸುವುದು, ನಿದ್ರೆಯಾದ ನಂತರವೂ ಉತ್ಸಾಹವೆನಿಸದಿರುವುದು ಮುಂತಾದ ಅನೇಕ ತೊಂದರೆಗಳಾಗುತ್ತವೆ. ಈ ಎಲ್ಲ ತೊಂದರೆಗಳಿಗೆ ಮಾನಸಿಕ ಕಾರಣಗಳೊಂದಿಗೆ ಶೇ.೮೦ರಷ್ಟು ಕಾರಣಗಳೂ ಆಧ್ಯಾತ್ಮಿಕವಾಗಿರುತ್ತವೆ. ಇದರಿಂದ ರಕ್ಷಣೆಯಾಗಿ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ಮಾಡಿ ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಓದಿ. ಸುಖದಾಯಕ (ಶಾಂತ) ನಿದ್ರೆಯನ್ನು ಹೇಗೆ ಪಡೆಯಬೇಕು? ೧. ಮಲಗುವ ಕೋಣೆಯಲ್ಲಿ ಸಂಪೂರ್ಣ ಕತ್ತಲೆಯನ್ನು ಮಾಡಿ ಮಲಗಬೇಡಿರಿ. ೨. ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಿರಿ. ೩. ದಿನವಿಡೀ ನಮ್ಮಿಂದಾದ ಅಪರಾಧಗಳ ಬಗ್ಗೆ ದೇವರಲ್ಲಿ ಕ್ಷಮೆ ಯಾಚಿಸಿರಿ. ೪. ಉಪಾಸ್ಯದೇವತೆಗೆ, ‘ನಿನ್ನ ಸಂರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ’ ಎಂದು ಪ್ರಾರ್ಥನೆ ಮಾಡಿರಿ. ೫. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮತ್ತು ಆದಷ್ಟು ಎಡಮಗ್ಗುಲಾಗಿ ಮಲಗಿರಿ. ೬. ಅಂಕುಡೊಂಕಾಗಿ, ಅಂಗಾತ, ದಕ್ಷಿಣದಿಕ್ಕಿಗೆ ಕಾಲು ಮಾಡಿ ಹಾಗೂ ದೇವರ ಎದುರು ಅತೀ ಸಮೀಪ ಮಲಗಬೇಡಿರಿ. ಮಲಗಿದ ಮೇಲೆ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಮಲಗುವಾಗ ಮಾಡಬೇಕಾದ ಆಧ್ಯಾತ್ಮಿಕ ಉಪಾಯಗಳು ೧. ಸಾತ್ತ್ವಿಕ ಊದುಬತ್ತಿಗಳನ್ನು ಉರಿಸಿ ಮಲಗುವ ಕೋಣೆಯಲ್ಲಿ ಎಲ್ಲ ಕಡೆಗೆ ತಿರುಗಿಸಬೇಕು. ನಂತರ ಅವುಗಳನ್ನು ದಿಂಬಿನಿಂದ ಸ್ವಲ್ಪ ದೂರದಲ್ಲಿ ಇಡಬೇಕು. ೨. ತಲೆಯ ಬಳಿ ತುಪ್ಪದ ಅಥವಾ ಎಣ್ಣೆಯ (ಎಳ್ಳೆಣ್ಣೆ ಅಥವಾ ಒಳ್ಳೆಣ್ಣೆಯ) ದೀಪವನ್ನು ಮಂದ ಜ್ಯೋತಿಯಲ್ಲಿ ಹಚ್ಚಿಡಬೇಕು. ೩. ಮಲಗುವ ಮೊದಲು ಹಾಸಿಗೆಯ ಕೆಳಗೆ ಮತ್ತು ಹಾಸಿಗೆಯ ಮೇಲೆ ವಿಭೂತಿಯನ್ನು ಹಾಕಬೇಕು ಅಥವಾ ವಿಭೂತಿಯ ನೀರನ್ನು ಸಿಂಪಡಿಸಬೇಕು. ೪. ಕೈ-ಕಾಲುಗಳಿಗೆ ವಿಭೂತಿಯನ್ನು ಹಚ್ಚಿಕೊಳ್ಳಬೇಕು. ೫. ಹಾಸಿಗೆಯ ಸುತ್ತಲೂ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಬೇಕು. ತಲೆ ಮತ್ತು ಕಾಲುಗಳ ಬಳಿ ಶ್ರೀ ಗಣಪತಿ ಹಾಗೂ ಎಡ ಮತ್ತು ಬಲಬದಿಗೆ ಶ್ರೀಕೃಷ್ಣನ ನಾಮಪಟ್ಟಿಗಳನ್ನು ಇಡಬೇಕು. ಈ ನಾಮಜಪ-ಪಟ್ಟಿಗಳನ್ನು ಹಾಸಿಗೆಯ ಹೊರಗೆ, ಹಾಸಿಗೆಯ ಮೇಲೆ ಅಥವಾ ಹಾಸಿಗೆಯ ಕೆಳಗೆ ತಮಗೆ ಅನುಕೂಲವಿದ್ದಂತೆ ಇಡಬೇಕು. (ಸನಾತನ ಸಂಸ್ಥೆಯು ಇಂತಹ ನಾಮಪಟ್ಟಿಗಳನ್ನು ತಯಾರಿಸಿದೆ. ಸ್ಪಂದನಶಾಸ್ತ್ರಕ್ಕನುಸಾರ ಯೋಗ್ಯ ಅಧ್ಯಯನ ಮಾಡಿ ಶ್ರೀ ಗಣಪತಿ, ಶ್ರೀಕೃಷ್ಣ, ಶ್ರೀರಾಮ, ಶ್ರೀ ದುರ್ಗಾದೇವಿ, ದತ್ತ, ಮಾರುತಿ, ಶಿವ ಈ ದೇವತೆಗಳ ನಾಮಪಟ್ಟಿಗಳನ್ನು ತಯಾರಿಸಲಾಗಿದೆ.) ಸಾತ್ತ್ವಿಕ ನಾಮಜಪ-ಪಟ್ಟಿಗಳ ಮಂಡಲವನ್ನು ಹಾಕಲು ಸಾಧ್ಯವಿಲ್ಲದಿದ್ದಲ್ಲಿ, ವಿಭೂತಿಯ ನೀರಿನ ಮಂಡಲವನ್ನು ಹಾಕಬೇಕು. ಈ ಮಂಡಲವನ್ನು ಹಾಸಿಗೆಯ ಮೇಲೆ ಕುಳಿತುಕೊಂಡು ಹಾಕಬೇಕು. ಇದಕ್ಕಾಗಿ ವಿಭೂತಿಮಿಶ್ರಿತ ನೀರಿನ ಪಾತ್ರೆಯನ್ನು ತೆಗೆದುಕೊಂಡು ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಕು. ಉಪಾಸ್ಯದೇವತೆಗೆ ಪ್ರಾರ್ಥನೆಯನ್ನು ಮಾಡಿ ಹಾಸಿಗೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮೂರು ಸಲ ನೀರನ್ನು ಸಿಂಪಡಿಸಬೇಕು. ಅದರ ನಂತರ ಹಾಸಿಗೆಯ ಹೊರಗೆ ಹೋಗಬಾರದು; ಏಕೆಂದರೆ ಅದರಿಂದ ಮಂಡಲವು ಭಂಗವಾಗುತ್ತದೆ. ಯಾವುದಾದರು ಕಾರಣದಿಂದ ಹಾಸಿಗೆಯ ಹೊರಗೆ ಹೋಗಬೇಕಾಗಿದ್ದಲ್ಲಿ, ಹಾಸಿಗೆಗೆ ಹಿಂತಿರುಗಿ ಬಂದಾಗ ಪುನಃ ವಿಭೂತಿಮಿಶ್ರಿತ ನೀರಿನ ಮಂಡಲವನ್ನು ಹಾಕಬೇಕು. ೬. ರಾತ್ರಿಯಿಡೀ ನಾಮಜಪ ಅಥವಾ ಪ.ಪೂ.ಭಕ್ತರಾಜ ಮಹಾರಾಜರ ಭಜನೆಗಳನ್ನು (ಟಿಪ್ಪಣಿ ೧) ಹಾಕಿಡಬೇಕು. ೭. ಹಾಸಿಗೆಯ ಸುತ್ತಲೂ ಖಾಲಿ ಪೆಟ್ಟಿಗೆಗಳನ್ನು (ಟಿಪ್ಪಣಿ ೨) ಇಡಬೇಕು. ಟಿಪ್ಪಣಿ ೧ - ಸನಾತನ ಸಂಸ್ಥೆಯ ಸ್ಫೂರ್ತಿಸ್ಥಾನವಾಗಿರುವ ಪ.ಪೂ.ಭಕ್ತರಾಜ ಮಹಾರಾಜರು ಈ ಭಜನೆಗಳನ್ನು ಸ್ವತಃ ಬರೆದಿದ್ದಾರೆ, ಸ್ವತಃ ಸಂಗೀತವನ್ನು ನೀಡಿದ್ದಾರೆ ಮತ್ತು ಸ್ವತಃ ಹಾಡಿದ್ದಾರೆ. ಅದರಲ್ಲಿನ ಚೈತನ್ಯವು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಟಿಪ್ಪಣಿ ೨ - ಖಾಲಿ ಪೆಟ್ಟಿಗೆಗಳಲ್ಲಿ ಟೊಳ್ಳು ಇರುತ್ತದೆ. ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ನಿರ್ಗುಣ ತತ್ತ್ವದಿಂದ ಕಪ್ಪು ಶಕ್ತಿಯು ನಾಶವಾಗುತ್ತದೆ. (ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ಗ್ರಂಥ ‘ಶಾಂತ ನಿದ್ರೆಗಾಗಿ ಏನು ಮಾಡಬೇಕು?’)
Original Post from: http://dharmagranth.blogspot.in/2012/11/nidra-tondare.html
© Sanatan Sanstha - All Rights Reserved
Original Post from: http://dharmagranth.blogspot.in/2012/11/nidra-tondare.html
© Sanatan Sanstha - All Rights Reserved
No comments:
Post a Comment