ನಮ್ಮಲ್ಲಿ
ಇಂದೂ ಕೂಡಾ ಹೆಚ್ಚಿನವರು ಕೃಷ್ಣ ಒಬ್ಬ ಸುಳ್ಳುಗಾರ, ಆತ ಮೋಸದಿಂದ ದ್ರೋಣ-ಕರ್ಣರನ್ನು
ಕೊಲ್ಲಿಸಿದ, ಧರ್ಮರಾಯನಿಂದ ಸುಳ್ಳು ಹೇಳಿಸಿದ, ಬೆಣ್ಣೆ ಕದ್ದ, ಗೋಪಿಯರ ಸೀರೆ ಕದ್ದ,
ಇತ್ಯಾದಿಯಾಗಿ ತಿಳಿದು ಗೊಂದಲಕ್ಕೊಳಗಾಗುವವರಿದ್ದಾರೆ. ಇದು ಯಾವುದು ಧರ್ಮ ಹಾಗೂ ಯಾವುದು
ಅಧರ್ಮ; ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎನ್ನುವ ಪರಿಜ್ಞಾನವಿಲ್ಲದಾಗ ಆಗುವ
ಗೊಂದಲ. ತಿರುಳನ್ನು ನೋಡದೇ ಮೇಲ್ನೋಟದಲ್ಲಿ ನಿಂತರೆ ಸತ್ಯ ನಮಗೆ ಅರ್ಥವಾಗುವುದಿಲ್ಲ.
ಸಂಕ್ಷಿಪ್ತವಾಗಿ ಒಂದು ಘಟನೆಯನ್ನು ಹೇಳಬೇಕೆಂದರೆ: ದುರ್ಯೋಧನನ ತೊಡೆಯನ್ನು ಭೀಮನಿಂದ
ಕೃಷ್ಣ ಮುರಿಸಿರುವುದು. ಇದನ್ನು ಬಲರಾಮ ಕೂಡಾ ಅಧರ್ಮ ಎಂದು ವಿರೋಧಿಸುತ್ತಾನೆ. ಆಗ
ಕೃಷ್ಣ ಕೊಟ್ಟ ಉತ್ತರ ಬಹಳ ರೋಚಕವಾದುದು. ಕೃಷ್ಣ ಹೇಳುತ್ತಾನೆ: “ಧರ್ಮ ಆಚರಣೆ
ಶ್ರೇಯಸ್ಸನ್ನು ತರುತ್ತದೆ ನಿಜ; ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ
ಮಾಡುವುದು ಕಷ್ಟ” ಎಂದು. ಕೃಷ್ಣ ದುರ್ಯೋಧನನನ್ನು ಉದ್ಧೇಶಿಸಿ ಹೇಳುತ್ತಾನೆ: “ನಿನ್ನ
ತೊಡೆ ಮುರಿದದ್ದು ಅಧರ್ಮ ಎಂದಿಯಲ್ಲ, ಆ ತೊಡೆ ಎಂತಹ ತೊಡೆ? ತುಂಬಿದ ಸಭೆಗೆ ಒಬ್ಬ
ಸ್ತ್ರೀಯನ್ನು ಅರೆನಗ್ನಾವಸ್ತೆಯಲ್ಲಿ ಎಳೆದು ತಂದು, ತೊಡೆತಟ್ಟಿ, ‘ನನ್ನ ತೊಡೆಯಮೇಲೆ
ಬಂದು ಕೂಡು’ ಎಂದು ಹೇಳಿದೆಯಲ್ಲ; ಪರಸ್ತ್ರೀಗೆ ತಟ್ಟಿದ ತೊಡೆಗೆ ಇದು ಕನಿಷ್ಠ ಶಿಕ್ಷೆ.
ಇಷ್ಟು ಮಾಡದೇ ಹೋದರೆ ಈ ದೇಶದಲ್ಲಿ ಧರ್ಮದ ಸ್ಥಿತಿ ಏನಾದೀತು”
ಎಂದು ಕೇಳುತ್ತಾನೆ ಕೃಷ್ಣ. ಈ ರೀತಿ ಮೇಲ್ನೋಟಕ್ಕೆ ಎಲ್ಲವೂ ವ್ಯತಿರಿಕ್ತವಾಗಿ ಕಂಡರೂ
ಕೂಡಾ, ಅದಕ್ಕಿಂತ ಬೇರೆ ಆಯಾಮದಲ್ಲಿ, ಸತ್ಯ-ಧರ್ಮವನ್ನು ನಮ್ಮ ಮುಂದೆ ತೆರೆದು ತೋರಿಸಿದ
ಭಗವಂತನ ಅಪೂರ್ವ ಅವತಾರ ಕೃಷ್ಣಾವತಾರ. ಈ ಸತ್ಯ ತಿಳಿದಾಗ ಮಾತ್ರ ನಮಗೆ ಕೃಷ್ಣಾವತಾರ
ಅರ್ಥವಾಗುತ್ತದೆ...
ಆಧಾರ : Bhagavad Gita Kannada
ಹಿಂದೂ ಧಾರ್ಮಿಕ ಕೃತಿಗಳ ಶಾಸ್ತ್ರ ತಿಳಿದುಕೊಳ್ಳಲು
Visit - http:// dharmagranth.blogspot.in/
Like - www.fb.com/dharma.granth
Join to group - http://tiny.cc/ Dharma-Granth-Group
.

Visit - http://
Like - www.fb.com/dharma.granth
Join to group - http://tiny.cc/
.
No comments:
Post a Comment