Thursday, 16 May 2013

Bhagavad Gita Kannada

 

 
ನಮ್ಮ ಮನಸ್ಸು ಬುದ್ದಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ದಿಯಿಂದ ಅಳೆಯಲು ಅಸಾದ್ಯ. ಭಗವಂತ ನಮಗೆ ತಿಳಿಯಲು ಅಸಾದ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು- ಮಣ್ಣು, ನೀರು, ಬೆಂಕಿ, ಗಾಳಿ ,ಆಕಾಶ, ಹಾಗು ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ.. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ಆದ್ದರಿಂದ ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ. ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ...
ಇಂದು ನಾವು ನಮ್ಮನ್ನು ಐದು ಮದಗಳಿಂದ ಹೊದ್ದುಕೊಂಡು ಬದುಕುತ್ತಿದ್ದೇವೆ. ಅವುಗಳೆಂದರೆ - ಕುಲದ ಮದ, ಐಶ್ವರ್ಯ ಮದ, ವಿದ್ಯೆಯ ಮದ, ಧನ ಮದ. ನಮ್ಮ ಮನೆತನ, ಪರಂಪರೆ, ಅದರ ಬಗ್ಗೆ ಹೆಗ್ಗಳಿಕೆ, ಇವು ಅಹಂಕಾರವಾಗಿ ಬೆಳೆದಾಗ ಅದು ನಮ್ಮನ್ನು ದೇವರಿಂದ ದೂರ ಮಾಡಿಸುತ್ತದೆ. ಅದೇ ರೀತಿ: ಅಧಿಕಾರದ ಮದ, ನನ್ನಂತಹ ವಿದ್ವಾಂಸ ಯಾರಿದ್ದಾರೆ ಎನ್ನುವ ವಿದ್ಯೆಯ ಮದ, ಸಂಪತ್ತಿನ ಮದ-ಇವು ಅಹಂಕಾರವಾಗಿ ಯಾರನ್ನು ಕಾಡುತ್ತದೋ ,ಅಂತವನ ಬಾಯಿಯಲ್ಲಿ ಭಗವಂತನ ಹೆಸರೇ ಬಾರದು. ಈ ಮದದ ಹೊದಿಕೆಯನ್ನು ಕಳಚಿ ಹೊರಬಂದಾಗ ಮಾತ್ರ ಭಗವಂತನ ದರ್ಶನ ಸಾಧ್ಯ.ಅಹಂಕಾರಶೂನ್ಯನಾಗಿ ಪೂರ್ಣ ಶರಣಾಗತಿಯಾಗುವುದೊಂದೇ ಭಗವಂತನ ಅನುಗ್ರಹಕ್ಕೆ ದಾರಿ. ನಮ್ಮ ಯಾವ ಮದವೂ ನಮ್ಮನ್ನು ಭಗವಂತನತ್ತ ಒಯ್ಯುವುದಿಲ್ಲ. ಹಾಗಾಗಿ ಮೊತ್ತಮೊದಲು ನಾವು ಈ ಮದದಿಂದ ಕಳಚಿಕೊಳ್ಳಬೇಕು...

No comments:

Post a Comment