Thursday, 17 January 2013

bhakti - amruta - baratipura samsthana



ನ್ನಡ ಭಕ್ತಿ ಭಾವಾಮೃತ
ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು ಅಧಮನು
................................


ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ



ಹೇಳಿ ಮಾಡುವ ನರನೊಬ್ಬ ನಡು ಮಧ್ಯಮನು
ಹೇಳದೇ ಮಾಡೋ ಪ್ರಭು ನೀನು ಪುರುಷೋತ್ತಮನು
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ



ಹಗಲು ಇರುಳು ನಿನ್ನ ಸ್ಮರಣೆ ಮಾಡಿ ದಿನ ಕಳೆವ ಆಸೆ ಇದೆ ಅಯ್ಯಪ್ಪ
ಮಾಯಾ ಮೋಹ ತ್ಯಜಿಸಿಲ್ಲ
ಇಂದು ತೊರೆದು ಬಿಡು ನಾಳೆ ತೊರೆದು ಬಿಡು ಎಂದು ತೂಗುತಿದೆ ಅಯ್ಯಪ್ಪ
ಮನಸ್ಸೇ ಮಾತು ಕೇಳಿಲ್ಲ
ಆಡಿ ನಾನು ನಡೆದಿಲ್ಲ ನಡೆದು ನನ್ನ ಜಯಸಿಲ್ಲ ಸ್ವಾಮಿ ನೀನು ನುಡಿದಿಲ್ಲ
ನಿನ್ನೆ ಜಯಸಿ ನಡೆದೆಲ್ಲ
ಹೇಳಿ ಮಾಡದ ನರನೊಬ್ಬ ಕಡು ಅಧಮನು
ಹೇಳದೇ ಮಾಡಿದ ಪ್ರಭು ನೀನು ದೈವೋತ್ತಮನು
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ



ಸಕಲ ವೇದಗಳ ಅಖಿಲ ಶಾಸ್ತ್ರಗಳ ನಿಖಿಲ ಭೋಧಗಳ ಅಯ್ಯಪ್ಪ
ನಾ ಕಲಿತು ಹಾಡೋ ಆಸೆ ಇದೆ
ನಾಳೆ ಮಾಡಲಿದೆ ವೇಳೆ ಸಾಲದಿದೆ ಎಂದು ಸಾಗುತ್ತಿದೆ ಅಯ್ಯಪ್ಪ
ಬಾಳು ಹಾಳು ಎನಿಸುತ್ತಿದೆ
ಆಡಿ ನಾನು ನಡೆದಿಲ್ಲ ನಡೆದು ನಿನ್ನ ತಿಳಿದಿಲ್ಲ
ಸ್ವಾಮಿ ನೀನು ನುಡಿದಿಲ್ಲ ಪಂಚಮ ವೇದ ಆಗಲ್ಲ
ಆಡಿ ಮಾಡದ ನರನೊಬ್ಬ ಕಡು ಅಧಮನು
ಆಡದೆ ಮಾಡಿದ ಪ್ರಭು ನೀನು ಸರ್ವೋತ್ತಮನು
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ



ಬೆಳಕು ನೆರಳುಗಳ ನರಕ ನಾಕಗಳ ಬ್ರಹ್ಮ್ಮ ಗಂಟುಗಳ ಅಯ್ಯಪ್ಪ
ಮೂಲ ಕೇಳೋ ಆಸೆ ಇದೆ
ಅಣುವು ಗಾತ್ರದಲ್ಲಿ ತೃಣವು ಪಾತ್ರದಲ್ಲಿ ಬದುಕು ನಡುಗುತಿದೆ ಅಯ್ಯಪ್ಪ
ಎಲ್ಲ ನೀನೆ ಅನಿಸುತ್ತಿದೆ
ನನ್ನ ನಾಡಿ ನನದಲ್ಲ ಆಡಿ ಹಾಡು ನಿನ್ನದೆಲ್ಲ
ಸ್ವಾಮಿ ನೀನು ನುಡಿದಿಲ್ಲ ನಿನ್ನ ಬಿಟ್ಟು ಏನಿಲ್ಲ
ಆದಿ ಅರಿಯದ ನರನೊಬ್ಬ ಕಡು ಬಡವನು
ಆಡಿ ಹಾಡಿಸೋ ಪ್ರಭು ನೀನು ಜಗೊದೊತ್ತಮನು



ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ
ಹೇಳಿ ಮಾಡೋ ನರನೊಬ್ಬ ನಡು ಮಧ್ಯಮನು
ಹೇಳದೇ ಮಾಡುವ ಪ್ರಭು ನೀನು ಪುರುಷೋತ್ತಮನು



ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ ಮಾಡುವವನು ಹೇಳಲಾರ

No comments:

Post a Comment